ಜನ್ಮ ಜಾತಕದಲ್ಲಿ ಈ ಗ್ರಹಗಳಿಂದ ಸಮಸ್ಯೆಗಳಿದ್ದರೆ ಮದುವೆ ವಿಚಾರದಲ್ಲಿ ತೊಂದರೆಗಳು ಗ್ಯಾರೆಂಟಿ..!

ಜೋತಿಷ್ಯ ಭಕ್ತಿ

ವಿವಾಹ ವಿಚಾರದಲ್ಲಿ ಸಾಮಾನ್ಯವಾಗಿ ಸಪ್ತಮ ಭಾವವನ್ನು ಲಗ್ನವನ್ನು ಮತ್ತು ಮಾಂಗಲ್ಯ ಸ್ಥಾನವಾದ ಅಷ್ಟಮ ಸ್ಥಾನವನ್ನು ನೋಡುತ್ತೇವೆ ಅದರಲ್ಲಿಯೂ ಹುಡುಗನಿಗೆ ಶುಕ್ರಗ್ರವನ್ನು ಹುಡುಗಿಗೆ ಕುಜಗ್ರಹವನ್ನು ಅದರ ಸ್ಥಾನ ಮತ್ತು ಶುಭ ಅಶುಭಸ್ಥಾನವನ್ನು ನೋಡುತ್ತೇವೆ ಇವೆಲ್ಲ ಚೆನ್ನಾಗಿದ್ದು ಕೆಲವೊಂದು ಸಾರಿ ಹುಡುಗ ಹುಡುಗಿಯರಿಗೆ ಮದುವೆ ನಿಧಾನವಾಗುವುದು ಏಕೆ? ಯಾವ ಗ್ರಹಗಳು ಮದುವೆಗೆ ತೊಂದರೆ ಕೊಡುತಿದ್ದಾನೆ ಮತ್ತು ಯಾವ ಸಮಯದಲ್ಲಿ ಮದುವೆಯಾಗಬಹುದು ಎಂಬುದನ್ನು ತಿಳಿಯಬಹುದಾಗಿದೆ ಈ ಕೆಳಗೆ ಯಾವ ಗ್ರಹಗಳು ಮದುವೆಗೆ ತೊಂದರೆಗಳು ಕೊಡಬಹುದು ಇಲ್ಲಿದೆ ನೋಡಿ.

ಹುಡುಗನ ವಿವಾಹಕ್ಕೆ ಅಧಿಪತಿಯಾದ ಶುಕ್ರಗ್ರಹ ಅಸ್ತ ನೀಚವಾಗಿ ಪಾಪಕ್ರತರಿಯಲ್ಲಿದ್ದರೆ ವಿವಾಹಕಾರಕ 2ಅಶುಭಗ್ರಹದ ಮಧ್ಯದಲ್ಲಿ ಇದ್ದರೂ ಸಹ ಮತ್ತು ಸೂರ್ಯನ ಪ್ರಭಾವಕ್ಕೆ ಒಳಗಾಗಿ ಅಸ್ತಂಗತನಾದಾಗಲೂ ಸಹ ತನ್ನ ಕಾರಕತ್ವದಲ್ಲಿ ಅಡಚಣೆಯಾಗಿ ವಿವಾಹ ವಿಳಂಬವಾಗುತ್ತದೆ.

ಸಪ್ತಮಾಧಿಪತಿ ನವಾಂಶದಲ್ಲಿ ಲಗ್ನಾಧಿಪತಿ ಚಂದ್ರನಿರುವ ನವಾಂಶ ರಾಶ್ಯಾಧಿಪತಿ ಅಸ್ತಾಂಗತನಾಗಿದ್ದರೆ ಸಪ್ತಮಾಧಿಪತಿ ಮತ್ತು ಮನೋಕಾರಕ ಚಂದ್ರರು ಅಸ್ತಂಗತವಾದಾಗ ಮದುವೆ ಆಸೆ ಆಕಾಂಕ್ಷಿಗಳು ಅಸ್ತವಾಗುತ್ತವೆ ಮನೋಕಾರಕ ಚಂದ್ರ ಮದುವೆಯ ಆಸೆ ಹಿಂಗಿ ಹೋಗುತ್ತದೆ.

ಶನಿಯ ನಕ್ಷತ್ರಗಳಾದ ಪುಷ್ಯ ಅನುರಾದ ಉತ್ತರಭಾದ್ರ ಅಥವಾ ಶನಿ ನವಾಂಶದಲ್ಲಿ ರವಿ ಚಂದ್ರ ಶುಕ್ರರಿದ್ದರೆ ಮನೋಕಾರಕರಾದ ಚಂದ್ರ ವಿವಾಹಕಾರಕ ಶುಕ್ರ ಆತ್ಮ ನಿರ್ಣಯಕಾರಕ ರವಿಯು ಇವರು ಶನಿಯಿಂದ ಅಥವಾ ಶನಿಯ ನಕ್ಷತ್ರಗಳಿಂದ ಮತ್ತು ನವಾಂಶದಲ್ಲಿ ಆಭಾದಿತರಾದಾಗ ವಿವಾಹ ವಿಳಂಬವಾಗುತ್ತದೆ.

ರಾಹು ಕೇತುಗಳು 2ಮತ್ತು 8ರಲ್ಲಿದ್ದರೆ ಅಥವಾ 5ನೇ ಮನೆಯಲ್ಲಿ 11ನೇ ಮನೆಯಲ್ಲಿ ನೀಚಗ್ರಹ ಸಂಬಂಧವಿದ್ದರೆ ಗ್ರಹಣ ಕಾಲವಿದ್ದರೆ ಕುಟುಂಬಸ್ಥಾನ ರಂದ್ರಸ್ಥಾನ ಪುತ್ರಸ್ಥಾನ ಲಾಭಸ್ಥಾನ ಅಶುಭಗ್ರಹಗಳಿಂದ ಆಭಾದಿತವಾಗಿ ಗ್ರಹಣ ಕಾಲಗಳಲ್ಲಿ ಸಂಧಿಕಾಲದಲ್ಲಿ ಅಮಾವಾಸ್ಯಗಳಲ್ಲಿ ಜನನವಾಗಿ ಲಗ್ನಾಧಿಪತಿ ಮತ್ತು ಚಂದ್ರ ವಿಷಮ ಸ್ಥಿತಿಯಲ್ಲಿದ್ದರೆ ವಿವಾಹ ವಿಳಂಬವಾಗುವ ಸಂಭವವಿರುತ್ತದೆ.

ಶುಕ್ರಗ್ರಹವು 8ರಲ್ಲಿ ಇದ್ದು ಶನಿ ಬುಧರ ದೃಷ್ಟಿ ಇದ್ದರೆ ಶುಕ್ರಗ್ರಹ ರಿಂದ ಸ್ಥಾನವನ್ನು ಮತ್ತು ಕುಟುಂಬ ಸ್ಥಾನವನ್ನು ಕೆಡಿಸಿ ಕುಟುಂಬ ಹೀನತೆ ಮಾಡಿ ಶನಿ ದೃಷ್ಠಿ ಬುಧ ದೃಷ್ಠಿ ಇದ್ದರೆ ಮನಸ್ಸಿನಲ್ಲಿ ವಿವಾಹದ ಆಸೆ ನಂದಿ ಹೋಗಿ ನಪಂಸಕತ್ವವಾಗುತ್ತದೆ.

ರಾಹು ಗ್ರಹ ಸಪ್ತಮ ಸ್ಥಾನದಲ್ಲಿದ್ದು ಯಾವುದಾದರು ಪಾಪಗ್ರಹ ವೀಕ್ಷಿಸಿದರೆ ಸಪ್ತಮದಲ್ಲಿ ಅಶುಭ ರಾಹು ವಿವಾಹವನ್ನು ಕೆಡಿಸಿ ಪ್ರೇಮ ವಿವಾಹಕ್ಕೆ ಎಡೆಮಾಡಿಕೊಡುತ್ತಾನೆ, ಜೊತೆಗೆ ಇದರ ಮೇಲೆ ಪಾಪಗ್ರಹಗಳ ದೃಷ್ಠಿ ಬಿದ್ದಾಗ ಅಶುಭಫಲ ಹೆಚ್ಚಾಗಿ ಇನ್ನೂ ಅಧಿಕ ದೊಷ ಉಂಟಾಗಿ ವಿವಾಹ ವಿಳಂಬವಾಗುತ್ತದೆ.

ಸಪ್ತಮ ಮತ್ತು ಕುಟುಂಬಾಧಿಪತಿಗಳು ಶನಿ ಕ್ಷೇತ್ರದಲ್ಲಿದ್ದರೆ ಅಥವಾ ಶನಿ ದೃಷ್ಠಿಗೊಳಗಾಗಿದ್ದಾರೆ ಮಾಂಗಲ್ಯ ಮತ್ತು ಕುಚುಂಬಾಧಿಪತಿಗಳು ಕ್ರೂರ ಶನಿ ಕ್ಷೇತ್ರದಲ್ಲಿ ಅಥವಾ ಶನಿ ದೃಷ್ಠಿಯಲ್ಲಿದ್ದರೆ ಆ 2 ಭಾವ ನಾಶವಾಗುತ್ತವೆ ಮತ್ತು ಶನಿಯು ಲಯಕಾರಕನಾಗಿರುವುದರಿಂದ ಮಾಂಗಲ್ಯ ಯೋಗವು ಲಯವಾಗಿರುತ್ತದೆ.

Leave a Reply

Your email address will not be published. Required fields are marked *