ಸಿಕ್ಕ ಸಿಕ್ಕಾಗೆ ನೀವು ರತ್ನಗಳನ್ನು ಧರಿಸುವ ಮೊದಲ ತಪ್ಪದೆ ಈ ನಿಯಮಗಳನ್ನು ಅನುಸರಿಸಿ…!

ಜೋತಿಷ್ಯ ಭಕ್ತಿ

ಯಾವುದೇ ರತ್ನ ಧರಿಸುವ ಮುನ್ನ ರತ್ನಶಾಸ್ತ್ರಜ್ಞರ ಸಲಹೆ ಇಲ್ಲದೆ ರತ್ನಧಾರಣೆಯನ್ನು ಮಾಡಬಾರದು. ಜಾತಕದಲ್ಲಿ ಯಾವ ದೆಶೆ ಯಾವ ಭುಕ್ತಿ ನಡೆಯುತ್ತಿದೆ ಎಂದು ತಿಳಿದ ನಂತರ ರತ್ನಗಳನ್ನು ಧರಿಸಬೇಕು. ಜಾತಕದಲ್ಲಿ ಕೆಟ್ಟಫಲಕೊಡುತಿರುಲ ಗ್ರಹದ ಸಂಬಂಧಪಟ್ಟ ರತ್ನವನ್ನು ಧರಿಸಿದರೆ ಉತ್ತಮ.

ರತ್ನಗಳನ್ನು ಧರಿಸಲು ನಿಮ್ಮ ಜನ್ಮ ನಕ್ಷತ್ರ ಅಥವಾ ಹೆಸರಿಗೆ ತಾರಾಬಲವಿರುವ ದಿನವೇ ಧರಿಸಬೇಕು. ಯಾವುದೇ ತಿಂಗಳ ಕೃಷ್ಣಪಕ್ಷದಲ್ಲಿ ರತ್ನಧಾರಣೆ ಮಾಡಬಾರದು. ಯಾವ ಗ್ರಹದ ರತ್ನ ಧರಿಸಬೇಕೋ ಆ ಗ್ರಹದ ವಾರ ದಿನವನ್ನೆ ಗೊತ್ತುಪಡಿಸಿ ಧರಿಸಬೇಕು

ನೈಜ ರತ್ನಗಳು ದೊರೆಯದಿದ್ದಾಗ ಉಪರತ್ನ ಇಲ್ಲವೆ ಮಿತ್ರ ಗ್ರಹದ ರತ್ನಗಳನ್ನು ಧರಿಸಬಹುದು. ಮುತ್ತುಗಳಿಗೆ ಹಾಗೂ ಯಾವುದೇ ರತ್ನಗಳಿಗೆ ರಂಧ್ರ ಮಾಡಿಸಿ ಉಪಯೋಗಿಸಬಾರದು. ಕಾಂತಿಹೀನ, ಮಲಿನ, ದಗ್ದರತ್ನಗಳ ಬಳಕೆ ಅಶುಭ ಫಲಗಳನ್ನುಂಟು ಮಾಡುತ್ತದೆ.

ಯಾವುದೇ ರತ್ನವನ್ನು ಧರಿಸುವ ಸಮಯದಲ್ಲಿ ಹೆಚ್ಚು ಫಲಕಾರಿಯಾಗಲು ಕ್ಷೀರದಿಂದ ತೊಳೆದು ನಿಮ್ಮ ಮನೆಯ ದೇವರ ಮುಂದೆ ಪೂಜಿಸಿ ಧರಿಸಿದರೆ ಉತ್ತಮ. ಮೊದಲು ಧರಿಸುವಾಗ ರಾಹುಕಾಲ, ಯಮಗಂಡಕಾಲಗಳಲ್ಲಿ ರತ್ನಧಾರಣೆ ಮಾಡಬಾರದು. ಸಾಮಾನ್ಯವಾಗಿ ರತ್ನಧಾರಣೆಯೆಂದು ಬ್ರಾಹ್ಮಿ ಮುಹೂರ್ತವೇ ಉತ್ತಮ ಫಲ ಸಿಗುತ್ತದೆ.

Leave a Reply

Your email address will not be published. Required fields are marked *